The Income Tax department is conducting raids in several locations in Tamil Nadu. The raids are a continuation of the one that was held two weeks back when officials searched the premises of the Jaya TV office and other locations belonging to aides of Sasikala Natarajan.
ಚೆನ್ನೈನಲ್ಲಿ ಮತ್ತೆ ಐಟಿ ಆಟ: ಶಶಿಕಲಾಗೆ ಶುರುವಾಯ್ತು ಶನಿಕಾಟ!? ಎಐಎಡಿಎಂಕೆ ನಾಯಕಿ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ಬಹುಶಃ ಶನಿಕಾಟ ಆರಂಭವಾದಂತಿದೆ! ಇತ್ತೀಚೆಗೆ ತಾನೇ ಶಶಿಕಲಾ ಅವರಿಗೆ ಒಡೆತನದ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆ ದಾಳಿಯ ಮುಂದಿನ ಭಾಗ ಎಂಬಂತೆ ಇಂದು(ನ.28) ಬೆಳಿಗ್ಗೆ ಸಹ ದಾಳಿ ನಡೆಸಿದ್ದಾರೆ.ಚೆನ್ನೈ ಮತ್ತು ಮಧುರೈನ 33 ಸ್ಥಳಗಳಲ್ಲಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನ.9 ರಂದು ಶಶಿಕಲಾ ಒಡೆತನದ ಬರೋಬ್ಬರಿ 187 ಸ್ಥಳಗಳ ಮೇಲೆ ನಡೆದಿದ್ದ ಸತತ 5 ದಿನಗಳ ಐಟಿದಾಳಿಯಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 1400 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿತ್ತು.ಈಗಾಗಲೇ ಅಕ್ರಮ ಆಸ್ತಿ ಹೊಂದಿರುವ ಅಪರಾಧದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ನಟರಾಜನ್ ಅವರಿಗೆ ಪದೇ ಪದೇ ಐಟಿ ಆಘಾತವಾಗುತ್ತಿರುವುದು ನುಂಗಲಾರದ ತುತ್ತೆನಿಸಿದೆ.